top of page

ಬೆಂಗಳೂರು ಕಿರುನಾಟಕೋತ್ಸವ 2024

ಪ್ರಶಸ್ತಿಗಳು :

1. ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ) - ಫಲಕ & 10,000/- ನಗದು.

2. ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ) - ಫಲಕ & 10,000/- ನಗದು.

3. ಅತ್ಯುತ್ತಮ ಕಥೆ (ಸ್ವರಚಿತ) - ಫಲಕ & 2,500/- ನಗದು.

4. 'ಆರ್.ನಾಗೇಶ್' ಗೌರವಾರ್ಥ  - ಅತ್ಯುತ್ತಮ ನಿರ್ದೇಶನ -  ಫಲಕ & 2,500/- ನಗದು.

5. ಅತ್ಯುತ್ತಮ ನಾಟಕ ವಿನ್ಯಾಸ - ಫಲಕ & 2,500/- ನಗದು.

6. 'ಸಂಚಾರಿ ವಿಜಯ್' ಗೌರವಾರ್ಥ - ಅತ್ಯುತ್ತಮ ನಟ - ಫಲಕ & 2,500/- ನಗದು.

7. 'ಉಮಾಶ್ರೀ'  ಗೌರವಾರ್ಥ  - ಅತ್ಯುತ್ತಮ ನಟಿ - ಫಲಕ & 2,500/- ನಗದು.

8. ಅತ್ಯುತ್ತಮ  ಭಿತ್ತಿಚಿತ್ರ ವಿನ್ಯಾಸ - ಫಲಕ & 2,500/- ನಗದು.

 

ವಿವರಗಳು :

1. ಬೆಂಗಳೂರು ಕಿರು ನಾಟಕೋತ್ಸವ 2024ರ ವಿಷಯ - ‘ಸಮಾನತೆ’.

2. ಭಾಗವಹಿಸುವ ತಂಡಗಳು ಮೇಲ್ಕಂಡ ವಿಷಯದ ಬಗ್ಗೆ ನಾಟಕವನ್ನು ಪ್ರದರ್ಶಿಸಬೇಕು.

3. ಭಾಗವಹಿಸುವ ಪ್ರತಿ ತಂಡಕ್ಕೂ, ರಂಗಸಜ್ಜಿಕೆಯ ಸಮಯ ಸೇರಿ 15 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುವುದು. ನಾಟಕ ಪ್ರದರ್ಶನ ಕನಿಷ್ಠ 10 ನಿಮಿಷವಿರಬೇಕು.

4. ಭಾಗವಹಿಸುವ ಪ್ರತಿತಂಡದಲ್ಲೂ ರಂಗದಮೇಲೆ ಕನಿಷ್ಠ2 - ಗರಿಷ್ಠ8 ಕಲಾವಿದರಿರಬಹುದು.

5. 26 ಜೂನ್ 2024 ರವರೆಗೆ ನೋಂದಣಿಗೆ ಅವಕಾಶವಿರುತ್ತದೆ.

6. ರಂಗತಂಡಗಳು ಮತ್ತು ರಂಗಕರ್ಮಿಗಳು ನೋಂದಾಯಿಸಿಕೊಳ್ಳಬಹುದು.

7. ಬೆಂಗಳೂರು ಹೊರತುಪಡಿಸಿ, ಬೇರೆ ಜಿಲ್ಲೆಯಿಂದ ಸ್ಪರ್ಧಿಸುವ ತಂಡಗಳಿಗೆ ಪ್ರಾಥಮಿಕ ಹಂತದ ಸ್ಪರ್ಧೆ ಆನ್ಲೈನ್ ನಲ್ಲಿ ನಡೆಯಲಿದೆ.

8. ರಂಗತಂಡಗಳು ಒಂದಕ್ಕಿಂತ ಹೆಚ್ಚು ನಾಟಕಗಳನ್ನು ನೋಂದಾಯಿಸಿಕೊಳ್ಳಬಹುದು, ಆದರೆ ಯಾವುದೇ ಕಲಾವಿದರು/ನಿರ್ದೇಶಕರು/ಬರಹಗಾರರು ಒಂದಕ್ಕಿಂತ ಹೆಚ್ಚು ತಂಡದಲ್ಲಿ ಭಾಗವಹಿಸುವಂತಿಲ್ಲ.

9. ಪ್ರತಿ ತಂಡವೂ 1000/- ರೂಪಾಯಿಗಳ ಪ್ರವೇಶ ದರವನ್ನು ಪಾವತಿಸತಕ್ಕದ್ದು,ಅಂತಿಮ ಸುತ್ತಿಗೆ ಆಯ್ಕೆಯಾಗದ ತಂಡದ ಪ್ರವೇಶ ದರವನ್ನು ಹಿಂತಿರುಗಿಸಲಾಗುವುದು.

10. ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡದ ಪ್ರವೇಶ ದರವನ್ನು ಹಿಂತಿರುಗಿಸಲಾಗುವುದಿಲ್ಲ.

11. ಮೊದಲ ಹಂತದ ಆಯ್ಕೆ ಪ್ರಕ್ರಿಯೆ 30 ಜೂನ್ 2024ರಂದು ಬೆಂಗಳೂರಿನ ಪ್ರಭಾತ್ ಕಲಾಸಂಭ್ರಮದಲ್ಲಿ ನಡೆಯಲಿದೆ.

12. ವೇಷಭೂಷಣಗಳು ಮತ್ತು ರಂಗಪರಿಕರಗಳು ಮೊದಲ ಹಂತದ ಆಯ್ಕೆ ಪ್ರಕ್ರಿಯೆಗೆ ಕಡ್ಡಾಯವಲ್ಲ.

13. ಮೊದಲ ಹಂತದ ಆಯ್ಕೆ ಪ್ರಕ್ರಿಯೆಗೆ ಸಾಮಾನ್ಯ ಬೆಳಕಿನ ವ್ಯವಸ್ಥೆ ಇರುತ್ತದೆ. ಸಂಗೀತವಿದ್ದಲ್ಲಿ, ನಿರ್ವಹಣೆಯನ್ನು ಆಯಾ ತಂಡಗಳೇ ಮಾಡಬೇಕು.

14. ಪ್ರತಿತಂಡವು ನಿಗದಿಪಡಿಸಿದ ಸಮಯದಲ್ಲಿ ತಮ್ಮ ನಾಟಕಗಳನ್ನು ಪ್ರದರ್ಶಿಸಲು ಸಿದ್ಧರಿರಬೇಕು. ತಪ್ಪಿದಲ್ಲಿ ಪ್ರವೇಶದರವನ್ನು ಹಿಂತಿರುಗಿಸಲಾಗುವುದಿಲ್ಲ.

15. ಅಂತಿಮಹಂತದ ಸ್ಪರ್ಧೆಗೆ 6 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

16. ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡಗಳಲ್ಲಿ ಯಾವುದಾದರೂ ತಂಡ ಕಾರಣಾಂತರಗಳಿಂದ ಹಿಂದೆ ಸರಿದಲ್ಲಿ, ಅಂಕಗಳ ಆಧಾರದಲ್ಲಿ ಬೇರೆ ತಂಡವು ಫಿನಾಲೆ ಪ್ರವೇಶಿಸುತ್ತದೆ.

17. ನೊಂದಣಿಯಾದ ತಂಡಗಳು ಹಿಂದೆ ಸರಿದಲ್ಲಿ, ತಂಡದ ಪ್ರವೇಶದರವನ್ನು ಹಿಂದಿರುಗಿಸಲಾಗುವುದಿಲ್ಲ.

18. ಮೊದಲ ಮತ್ತು ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರೂ ಬೇರೆಯಾಗಿರುತ್ತಾರೆ ಮತ್ತು ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.

19. ತಾಂತ್ರಿಕ ನಿರ್ದೇಶಕರು ಮತ್ತು ನಾಟಕೋತ್ಸವದ ನಿರ್ದೇಶಕರು ಅಂತಿಮ ಸುತ್ತಿಗೆ ಆಯ್ಕೆಯಾಗುವ ತಂಡಗಳ ನಿರ್ದೇಶಕರು/ ಪ್ರತಿನಿಧಿಗಳನ್ನು ಸಂಪರ್ಕಿಸಿ ಅಂತಿಮ ಹಂತದ ಸ್ಪರ್ಧೆಯ ವಿವರಣೆಯನ್ನು ನೀಡುತ್ತಾರೆ.

20. ಬೆಳಕಿನ ವಿನ್ಯಾಸವನ್ನು ಪ್ರತಿ ತಂಡಕ್ಕೂ ಅಂತಿಮ ಹಂತದ ಸ್ಪರ್ಧೆಯ ಮೊದಲು ನೀಡಲಾಗುತ್ತದೆ.

21. ಪ್ರತಿ ತಂಡಕ್ಕೂ ಅಂತಿಮ ಹಂತದ ಸ್ಪರ್ಧೆಯ ಮೊದಲು ತಾಂತ್ರಿಕ ಪ್ರದರ್ಶನ ಮಾಡಲು ಸಮಯಾವಕಾಶ ನೀಡಲಾಗುತ್ತದೆ. ನಿಗದಿಪಡಿಸಿದ ಸಮಯದಲ್ಲಿ ಪ್ರದರ್ಶನವನ್ನು ಕಡ್ಡಾಯವಾಗಿ ನೀಡಬೇಕು. ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ.

22. ಪ್ರತಿ ತಂಡವು ಪ್ರಸಾದನ ಮುಗಿದ ನಂತರ, ಮತ್ತೊಂದು ತಂಡಕ್ಕೆ ಗ್ರೀನ್ ರೂಮ್ ಬಿಟ್ಟು ಕೊಡಬೇಕು.

23. ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದ ತಂಡಗಳು ತಾವು ಪ್ರದರ್ಶಿಸುವ ನಾಟಕದ ಸ್ಕ್ರಿಪ್ಟ್ ಅನ್ನು ಟೈಪ್ ಮಾಡಿ, ಮೈಕ್ರೋಸಾಫ್ಟ್ ವರ್ಡ್ ಫಾರ್ಮ್ಯಾಟ್ ನಲ್ಲಿ ನೀಡಬೇಕು.

24. ಅಂತಿಮ ಹಂತದ ಸ್ಪರ್ಧೆಯ ಪ್ರತಿ ತಂಡದ ಪ್ರದರ್ಶನ ಸಮಯವನ್ನು, ಆಯ್ಕೆಯಾದ ಎಲ್ಲಾ ತಂಡಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ 30 ಜೂನ್ 2024 ರಂದು ಚೀಟಿ ತೆಗೆಯುವುದರ ಮೂಲಕ ನಿರ್ಧರಿಸಲಾಗುವುದು.

25. ಅಂತಿಮ ಹಂತದ ಸ್ಪರ್ಧೆಯು 14 ಜುಲೈ 2024 ರಂದು ಬೆಂಗಳೂರಿನ ಪ್ರಭಾತ್ ಕಲಾಸಂಭ್ರಮದಲ್ಲಿ ಸಂಜೆ 6.00 ಕ್ಕೆ ಪ್ರಾರಂಭವಾಗಲಿದೆ.

26. ಅಂತಿಮ ಹಂತದ ಸ್ಪರ್ಧೆಯಲ್ಲಿ ಪ್ರದರ್ಶಿಸಲ್ಪಡುವ ಕಿರುನಾಟಕಗಳನ್ನು ಚಿತ್ರೀಕರಿಸಿ, ಪ್ರತಿಷ್ಠಿತ ವಾಹಿನಿಯ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗುವುದು.

 

ನೋಂದಣಿಗಾಗಿ ಇಲ್ಲಿ ಒತ್ತಿ

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಚೈತ್ರ  ಆನಂದ್  |  +91 - 8123690463

 ಕಾರ್ಯಕ್ರಮ ಸಂಯೋಜಕರು

ಹನು ರಾಮಸಂಜೀವ - ನಾಟಕೋತ್ಸವದ ನಿರ್ದೇಶಕರು

ನಂದೀಶ್ ದೇವ್ - ನಾಟಕೋತ್ಸವದ ನಿರ್ದೇಶಕರು

ಮಂಜು ನಾರಾಯಣ್ - ತಾಂತ್ರಿಕ ನಿರ್ದೇಶಕರು

+91-9686869676 | +91-9902590303 | bengalurushortplayfestival@gmail.com

 

bottom of page